Ad
GREEN VALLEY INTERNATIONAL SCHOOL
ರಾಜ್ಯ

ಟಾಪ್ ಇನ್ ಟೌನ್ ಮುಲ್ಲಾ ನೇತೃತ್ವದ ಅಂಜುಮನ್ ಹಿತರಕ್ಷಣಾ ಬಣದಿಂದ ಮುದ್ದೇಬಿಹಾಳ ಅಂಜುಮನ್ ಇಸ್ಲಾಂ ಕಮಿಟಿಯ ಚುನಾವಣೆ–2026 ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟ.

ಮುದ್ದೇಬಿಹಾಳ ಅಂಜುಮನ್ ಇಸ್ಲಾಂ ಕಮಿಟಿಯ ಚುನಾವಣೆ–2026ರ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಗೊಂಡ ಹಿನ್ನೆಲೆಯಲ್ಲಿ, ಟಾಪ್ ಇನ್ ಟೌನ್ ಮುಲ್ಲಾ ಅವರ ನೇತೃತ್ವದಲ್ಲಿ ಅಂಜುಮನ್ ಹಿತರಕ್ಷಣಾ ಬಣದ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ವಿವಿಧ ಪಂಗಡಗಳ ಮುಖಂಡರು ಹಾಗೂ ಅಭ್ಯರ್ಥಿಗಳು ಭಾಗವಹಿಸಿ ಸಂಸ್ಥೆಯ ಅಭಿವೃದ್ಧಿ, ಶಿಕ್ಷಣಕ್ಕೆ ಆದ್ಯತೆ, ಪಾರದರ್ಶಕ ಆಡಳಿತ ಹಾಗೂ ಸಮುದಾಯದ ಸೇವೆಯ ಸಂಕಲ್ಪದೊಂದಿಗೆ ಬಣದ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಿದರು.

ನಮಸ್ತೆ ಕರ್ನಾಟಕ ಡೆಸ್ಕ್
3/8/2026 · 207 views
ಮುದ್ದೇಬಿಹಾಳ, ಆ. 3: ಮುದ್ದೇಬಿಹಾಳ ಅಂಜುಮನ್ ಇಸ್ಲಾಂ ಕಮಿಟಿಯ ಚುನಾವಣೆ–2026ರ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಅಂಜುಮನ್ ಹಿತರಕ್ಷಣಾ ಸಮಿತಿಯ ವತಿಯಿಂದ ಟಾಪ್ ಇನ್ ಟೌನ್ ಮುಲ್ಲಾ ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ವಿವಿಧ ಪಂಗಡಗಳ ಅಭ್ಯರ್ಥಿಗಳು, ಹಿರಿಯರು, ಯುವ ಮುಖಂಡರು ಹಾಗೂ ಸಮುದಾಯದ ಪ್ರಮುಖರು ಭಾಗವಹಿಸಿ ಅಂಜುಮನ್ ಹಿತರಕ್ಷಣಾ ಬಣಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು. ಅಂಜುಮನ್ ಹಿತರಕ್ಷಣಾ ಸಮಿತಿಯು ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆಗೆ ನಡೆಸಿದ ನಿರಂತರ ಹೋರಾಟದ ಫಲವಾಗಿ ಚುನಾವಣಾ ಪ್ರಕ್ರಿಯೆ ಸುಗಮವಾಗಿ ಸಾಗುತ್ತಿರುವುದು ಸಂತಸದ ವಿಚಾರ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಸಭೆಯಲ್ಲಿ ಅಂಜುಮನ್ ಇಸ್ಲಾಂ ಸಂಸ್ಥೆಯ ಅಭಿವೃದ್ಧಿ, ಶಾಲೆ-ಕಾಲೇಜುಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವುದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುವುದು, ಆಡಳಿತದಲ್ಲಿ ಪಾರದರ್ಶಕತೆ, ಸಮುದಾಯದ ಎಲ್ಲ ವರ್ಗಗಳ ಸಹಭಾಗಿತ್ವ ಹಾಗೂ ಸಂಸ್ಥೆಯನ್ನು ಅಭಿವೃದ್ಧಿಯ ಹೊಸ ಹಂತಕ್ಕೆ ಕೊಂಡೊಯ್ಯುವ ಕುರಿತು ವಿಸ್ತೃತ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಅಂಜುಮನ್ ಹಿತರಕ್ಷಣಾ ಬಣದಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಅಧಿಕೃತ ಪಟ್ಟಿಯನ್ನೂ ಬಿಡುಗಡೆ ಮಾಡಲಾಯಿತು. ಅಂಜುಮನ್ ಹಿತರಕ್ಷಣಾ ಬಣದಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಕ್ರಮ ಸಂಖ್ಯೆ ಅಭ್ಯರ್ಥಿಯ ಹೆಸರು ಚುನಾವಣಾ ಗುರುತು 34 ಮಹೇಬೂಬ ಮುಲ್ಲಾ (ಟಾಪ್ ಇನ್ ಟೌನ್) COAT 51 ನಬಿರಸುಲ್ ಮುದ್ನಾಳ (ವಕೀಲರು) TELEVISION 44 ಮೊಹಮ್ಮದ್ ರಫೀ ಲಿಂಗಸುಗೂರು ವಕೀಲರು) PEN DRIVE 59 ಶಬ್ಬೀರ್ ಬಾಗಲಕೋಟ (ವಕೀಲರು) NECK TIE 55 ಮೊಹಮ್ಮದ್ ರಫಿಕ್ ಬಾ. ದ್ರಾಕ್ಷಿ CARROM BOARD 01 ಅಬ್ದುಲ್ ರಹಿಮಾನ್ ಹಳ್ಳೂರ AIR CONDITIONER 52 ನಜೀರ ಅಹ್ಮದ್ ಮಮದಾಪುರ GIFT PACK 35 ಮೊಹಮ್ಮದ್ ರಫೀಕ್ ನಾಗರಾಳ COCONUT TREES 45 ಮೊಹಮ್ಮದ್ ರಫೀಕ್ ಕಲಬುರ್ಗಿ TELEPHONE 47 ಮೊಹಮ್ಮದ್ ಯೂಸುಫ್ ಸಾತಿಹಾಳ BRICKS ಸಭೆಯಲ್ಲಿ ಮಾತನಾಡಿದ ಮುಖಂಡರು, ಚುನಾವಣೆ ಯಾವುದೇ ವೈಮನಸ್ಸಿಗೆ ಕಾರಣವಾಗದೆ ಸಹೋದರತ್ವ, ಸೌಹಾರ್ದತೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳೊಂದಿಗೆ ನಡೆಯಬೇಕು ಎಂದು ಕರೆ ನೀಡಿದರು. ಜೊತೆಗೆ ಅಂಜುಮನ್ ಇಸ್ಲಾಂ ಸಂಸ್ಥೆಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಯೋಗ್ಯ, ಪ್ರಾಮಾಣಿಕ ಹಾಗೂ ಸೇವಾ ಮನೋಭಾವ ಹೊಂದಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಮತದಾರರಿಗೆ ಮನವಿ ಮಾಡಿದರು. ಅಂಜುಮನ್ ಹಿತರಕ್ಷಣಾ ಬಣದ ಮನವಿ "ನಿಮ್ಮ ಒಂದು ಅಮೂಲ್ಯವಾದ ಮತ ಅಂಜುಮನ್ ಇಸ್ಲಾಂ ಸಂಸ್ಥೆಯ ಭವಿಷ್ಯವನ್ನು ನಿರ್ಧರಿಸುತ್ತದೆ. ಆದ್ದರಿಂದ ಯೋಚಿಸಿ, ಪ್ರಾಮಾಣಿಕವಾಗಿ ಸೇವೆ ಮಾಡುವ ಅಭ್ಯರ್ಥಿಗಳನ್ನು ಬೆಂಬಲಿಸಿ. ಶಿಕ್ಷಣ, ಅಭಿವೃದ್ಧಿ ಮತ್ತು ಪಾರದರ್ಶಕ ಆಡಳಿತಕ್ಕಾಗಿ ಅಂಜುಮನ್ ಹಿತರಕ್ಷಣಾ ಬಣದ ಅಭ್ಯರ್ಥಿಗಳಿಗೆ ನಿಮ್ಮ ಅಮೂಲ್ಯವಾದ ಮತ ನೀಡಿ."
Ad
ಸಂಪಾದಕರು

ಕಾಮೆಂಟ್‌ಗಳು (0)

ಕಾಮೆಂಟ್ ಮಾಡಲು ಲಾಗಿನ್ ಮಾಡಿ.

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ!