ಬ್ರೇಕಿಂಗ್
Ad
SAI CAR CARE
ರಾಜ್ಯ

ಮುದ್ದೇಬಿಹಾಳದಲ್ಲಿ ಸೆ.21ರಂದು ‘ಸೀರತ ಸಮಾರಂಭ–2026’: ಪ್ರವಾದಿ ಮುಹಮ್ಮದ್ (ಸ) ಅವರ ಜೀವನ ಸಂದೇಶದ ಕುರಿತು ವಿಶೇಷ ಕಾರ್ಯಕ್ರಮ

ಜಮಾಅತೆ ಇಸ್ಲಾಮಿ-ಏ-ಹಿಂದ್, ಮುದ್ದೇಬಿಹಾಳ ವತಿಯಿಂದ ‘ಕ್ರಾಂತಿ ಜ್ಯೋತಿ ಪ್ರವಾದಿ ಮುಹಮ್ಮದ್ (ಸ) – ಸೀರತ ಅಭಿಯಾನ–2026’ಅಂಗವಾಗಿ ಸೆಪ್ಟೆಂಬರ್ 21ರಂದು ಸೀರತ ಸಮಾರಂಭ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಖ್ಯಾತ ಪ್ರವಚನಕಾರ ಜನಾಬ್ ಅಕ್ಬರ್ ಅಲಿ ಉಡುಪಿ, ಮುದ್ದೇಬಿಹಾಳ ತಾಲ್ಲೂಕಿನ ಪೂಜ್ಯ ಶ್ರೀ ಸಿದ್ದಲಿಂಗ ದೇವರು ಹಾಗೂ ಬ್ರಹ್ಮಕುಮಾರಿ ರೇಣುಕಾ ಅಕ್ಕನವರು ಭಾಗವಹಿಸಿ ಪ್ರವಾದಿ ಮುಹಮ್ಮದ್ (ಸ) ಅವರ ಜೀವನ, ಸಂದೇಶ ಹಾಗೂ ಮಾನವೀಯ ಮೌಲ್ಯಗಳ ಕುರಿತು ತಮ್ಮ ನುಡಿ ನಮನಗಳನ್ನು ಸಲ್ಲಿಸಲಿದ್ದಾರೆ.

ವ
ವರದಿ:ಅಬ್ದುಲ್ ಗಫೂರ್ ಕಡಕೋಳ
19/9/2026 · 259 views
Ad
ನಮಸ್ತೆ ಕರ್ನಾಟಕ
ಮುದ್ದೇಬಿಹಾಳ, ಸೆ.19: ಜಮಾಅತೆ ಇಸ್ಲಾಮಿ-ಏ-ಹಿಂದ್, ಮುದ್ದೇಬಿಹಾಳ ವತಿಯಿಂದ ‘ಕ್ರಾಂತಿ ಜ್ಯೋತಿ ಪ್ರವಾದಿ ಮುಹಮ್ಮದ್ (ಸ) – ಸೀರತ ಅಭಿಯಾನ–2026’ ಅಂಗವಾಗಿ ವಿಶೇಷ ಸೀರತ ಸಮಾರಂಭ ಆಯೋಜಿಸಲಾಗಿದೆ. ಮುದ್ದೇಬಿಹಾಳ ನಗರದ ವಿಜಯ ಮಹಾಂತೇಶ ಮಂಗಲ ಕಾರ್ಯಾಲಯದಲ್ಲಿ ಸೆಪ್ಟೆಂಬರ್ 21, 2026ರಂದು ಸಂಜೆ 7 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಖ್ಯಾತ ಪ್ರವಚನಕಾರ ಜನಾಬ್ ಅಕ್ಬರ್ ಅಲಿ ಉಡುಪಿ, ಮುದ್ದೇಬಿಹಾಳ ತಾಲ್ಲೂಕಿನ ಪೂಜ್ಯ ಶ್ರೀ ಸಿದ್ದಲಿಂಗ ದೇವರು ಹಾಗೂ ಬ್ರಹ್ಮಕುಮಾರಿ ರೇಣುಕಾ ಅಕ್ಕನವರು ಭಾಗವಹಿಸಲಿದ್ದಾರೆ. ವಿವಿಧ ಧರ್ಮ ಹಾಗೂ ಸಮುದಾಯಗಳ ಗಣ್ಯರು ಒಂದೇ ವೇದಿಕೆಯಲ್ಲಿ ಭಾಗವಹಿಸಿ ಪ್ರವಾದಿ ಮುಹಮ್ಮದ್ (ಸ) ಅವರ ಜೀವನಾದರ್ಶ, ಮಾನವೀಯ ಮೌಲ್ಯಗಳು, ಸಹಬಾಳ್ವೆ, ಶಾಂತಿ ಹಾಗೂ ಸಮಾಜಕ್ಕೆ ನೀಡಿದ ಸಂದೇಶಗಳ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ. ‘ಕ್ರಾಂತಿ ಜ್ಯೋತಿ ಪ್ರವಾದಿ ಮುಹಮ್ಮದ್ (ಸ)’ಎಂಬ ಆಶಯದೊಂದಿಗೆ ನಡೆಯುತ್ತಿರುವ ಸೀರತ ಅಭಿಯಾನದ ಅಂಗವಾಗಿ ಆಯೋಜಿಸಿರುವ ಈ ಕಾರ್ಯಕ್ರಮವು ಪರಸ್ಪರ ಗೌರವ, ಸೌಹಾರ್ದತೆ ಹಾಗೂ ಮಾನವೀಯ ಮೌಲ್ಯಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶ ಹೊಂದಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸೀರತ ಸಮಾರಂಭವನ್ನು ಯಶಸ್ವಿಗೊಳಿಸುವಂತೆ ಜಮಾಅತೆ ಇಸ್ಲಾಮಿ-ಏ-ಹಿಂದ್, ಮುದ್ದೇಬಿಹಾಳ ಘಟಕದ ವತಿಯಿಂದ ಸರ್ವ ಧರ್ಮಿಯ ಸಹೋದರ ಹಾಗು ಸಹೋದರಿಯರಿಗೆ ಆಹ್ವಾನಿಸಲಾಗಿದೆ.
Ad
ನಮಸ್ತೆ ಕರ್ನಾಟಕ

ಕಾಮೆಂಟ್‌ಗಳು (0)

ಕಾಮೆಂಟ್ ಮಾಡಲು ಲಾಗಿನ್ ಮಾಡಿ.

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ!