ಬ್ರೇಕಿಂಗ್
Ad
SAI CAR CARE
ರಾಜ್ಯ

ಕಪ್ಪತ್ತಗುಡ್ಡದಲ್ಲಿ ಪಾರಂಪರಿಕ ವೈದ್ಯರಿಗೆ ಎರಡು ದಿನಗಳ ಉಚಿತ ಕಾರ್ಯಾಗಾರ

ಔಷಧೀಯ ಸಸ್ಯಗಳ ಪರಿಚಯ, ಬಳಕೆ, ಸಂರಕ್ಷಣೆ ಹಾಗೂ ಪರಿಸರ ರಕ್ಷಣೆಗೆ ಒತ್ತು

ವ
ವರದಿ: ಅಬ್ದುಲ್ ಗಫೂರ್ ಕಡಕೋಳ
21/9/2026 · 167 views
Ad
ನಮಸ್ತೆ ಕರ್ನಾಟಕ
ಗದಗ ಸೇ 21:ಪಾರಂಪರಿಕ ವೈದ್ಯಕೀಯ ಪದ್ಧತಿಯ ಅಮೂಲ್ಯ ಜ್ಞಾನವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಅಖಿಲ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ತು ಮತ್ತು ಸಂಘಗಳ ಒಕ್ಕೂಟ (ರಿ.), ಬೆಂಗಳೂರು ವತಿಯಿಂದ ಗದಗ ಜಿಲ್ಲೆಯ ಕಪ್ಪತ್ತಗುಡ್ಡದಲ್ಲಿ ಪಾರಂಪರಿಕ ವೈದ್ಯರಿಗೆ ಎರಡು ದಿನಗಳ ಉಚಿತ ಕಾರ್ಯಾಗಾರ ಆಯೋಜಿಸಲಾಗಿದೆ. ಕಾರ್ಯಗಾರದ ಮೇಲ್ವಿಚಾರಣಿಯನ್ನು ವೈದ್ಯ ಶ್ರೀ ಚನ್ನವೀರಪ್ಪ ಕೊಂಚಕೇರಿ, ತಿಪ್ಪಣ್ಣ ಸಾಲಿಖಾನೆ, ವೈದ್ಯ ಕುಮಾರಸ್ವಾಮಿ ಸಂಗಪ್ಪ ಪರಶೆಟ್ಟಿ, ಡಿ.ಜಿ. ರವಿಕುಮಾರ್, ವಿಜಯ ಕುಮಾರ್, ರಿಯಾಜ್ ಖಾನ್ ರಾಜಭಕ್ಷ, ಹನುಮಂತಪ್ಪ ಪೂಜಾರಿ, ಶಿವಲೀಲಾ ಪಾಟೀಲ್, ಗೀತಾವಾಣಿ, ದಿನೇಶ್ ಬೆಳಗಾವಿ ಹಾಗೂ ಪ್ರಕಾಶ್ ಬೆಳಗಾವಿ ಒಕ್ಕೂಟದ ಪದಾಧಿಕಾರಿಗಳು ವಹಿಸಲಿದ್ದಾರೆ. ಸೆಪ್ಟೆಂಬರ್ 22 ಮತ್ತು 23ರಂದು ನಡೆಯಲಿರುವ ಕಾರ್ಯಾಗಾರದಲ್ಲಿ ಔಷಧೀಯ ಸಸ್ಯಗಳ ಗುರುತಿಸುವಿಕೆ, ಸಾಂಪ್ರದಾಯಿಕ ಬಳಕೆ, ಸಂಗ್ರಹ ವಿಧಾನ, ಸದ್ಬಳಕೆ, ಸಂರಕ್ಷಣೆ ಹಾಗೂ ಪರಿಸರ ರಕ್ಷಣೆಯ ಕುರಿತು ತಜ್ಞರಿಂದ ಮಾಹಿತಿ ನೀಡಲಾಗುತ್ತದೆ. ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇರಕಲ್ ಮಠದ ಶ್ರೀ ಬಸವ ಪ್ರಸಾದ್ ಮಹಾಸ್ವಾಮಿಗಳ ಗೌರವ ಅಧ್ಯಕ್ಷತೆಯಲ್ಲಿ ಹಾಗೂ ಒಕ್ಕೂಟದ ಅಧ್ಯಕ್ಷ ವೈದ್ಯ ಶ್ರೀ ಶರಣಪ್ಪ ಬಳ್ಳಾರಿ ಅವರ ನೇತೃತ್ವದಲ್ಲಿ ಕಾರ್ಯಾಗಾರ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಪಾರಂಪರಿಕ ವೈದ್ಯರಿಗೆ ಎರಡು ದಿನಗಳ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ಥಳ:ಕಪ್ಪತ್ತಗುಡ್ಡ, ತಾ. ಮುಂಡರಗಿ, ಜಿ. ಗದಗ ದಿನಾಂಕ:ಸೆಪ್ಟೆಂಬರ್ 22 ಮತ್ತು 23, 2026 ವಿಷಯ: ಔಷಧೀಯ ಸಸ್ಯಗಳ ಪರಿಚಯ, ಬಳಕೆ, ಸಂರಕ್ಷಣೆ ಮತ್ತು ಪರಿಸರ ರಕ್ಷಣೆ ರಾಜ್ಯದ ಎಲ್ಲಾ ಜಿಲ್ಲೆಗಳ ಪಾರಂಪರಿಕ ವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಾಗಾರದ ಸದುಪಯೋಗ ಪಡೆಯುವಂತೆ ಒಕ್ಕೂಟದ ಅಧ್ಯಕ್ಷ ವೈದ್ಯ ಶ್ರೀ ಶರಣಪ್ಪ ಬಳ್ಳಾರಿ ಮನವಿ ಮಾಡಿದ್ದಾರೆ.
Ad
ನಮಸ್ತೆ ಕರ್ನಾಟಕ

ಕಾಮೆಂಟ್‌ಗಳು (0)

ಕಾಮೆಂಟ್ ಮಾಡಲು ಲಾಗಿನ್ ಮಾಡಿ.

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ!