ರಾಜ್ಯ

ಮುದ್ದೇಬಿಹಾಳ ಅಂಜುಮನ್ ಇಸ್ಲಾಂ ಕಮಿಟಿ ಚುನಾವಣೆ ಪ್ರಕ್ರಿಯೆ ಶೀಘ್ರ ಪುನರಾರಂಭಕ್ಕೆ ಹಿತರಕ್ಷಣಾ ಸಮಿತಿಯ ಆಗ್ರಹ

ಅಂಜುಮನ್ ಇಸ್ಲಾಂ ಕಮಿಟಿಯ ಚುನಾವಣೆ ಸಮುದಾಯದ ಪ್ರಜಾಪ್ರಭುತ್ವ, ಪಾರದರ್ಶಕ ಆಡಳಿತ ಮತ್ತು ಸಂಸ್ಥೆಯ ಅಭಿವೃದ್ಧಿಗೆ ಅತ್ಯಂತ ಮಹತ್ವದ್ದಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಂಡು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವ ಮೂಲಕ ಸಮುದಾಯದ ನಿರೀಕ್ಷೆಯನ್ನು ಈಡೇರಿಸುವರೆಂಬ ವಿಶ್ವಾಸವನ್ನು ಹಿತರಕ್ಷಣಾ ಸಮಿತಿಯು ವ್ಯಕ್ತಪಡಿಸಿದೆ.

ನಮಸ್ತೆ ಕರ್ನಾಟಕ ಡೆಸ್ಕ್
1 ಗಂಟೆಗಳ ಹಿಂದೆ · 30 views
ಮುದ್ದೇಬಿಹಾಳ ಅಂಜುಮನ್ ಇಸ್ಲಾಂ ಕಮಿಟಿ ಚುನಾವಣೆ ಪ್ರಕ್ರಿಯೆ ಶೀಘ್ರ ಪುನರಾರಂಭಕ್ಕೆ ಹಿತರಕ್ಷಣಾ ಸಮಿತಿಯ ಆಗ್ರಹ ಮುದ್ದೇಬಿಹಾಳ, ಜುಲೈ 22: "ಓಡಾಡಿದರೆ ಹೊತ್ತು ಮುಣಗುವುದಿಲ್ಲ" ಎಂಬ ಗಾದೆಯಂತೆ ನಿರಂತರ ಪ್ರಯತ್ನಕ್ಕೆ ಫಲ ಸಿಗುತ್ತದೆ ಎಂಬ ವಿಶ್ವಾಸದೊಂದಿಗೆ ಮುದ್ದೇಬಿಹಾಳ ಅಂಜುಮನ್ ಹಿತರಕ್ಷಣಾ ಸಮಿತಿಯು ಅಂಜುಮನ್ ಇಸ್ಲಾಂ ಕಮಿಟಿಯ ಚುನಾವಣಾ ಪ್ರಕ್ರಿಯೆಯನ್ನು ಶೀಘ್ರವಾಗಿ ಪುನರಾರಂಭಿಸುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಆಗ್ರಹಿಸಿದೆ. ಮುದ್ದೇಬಿಹಾಳ ಅಂಜುಮನ್ ಇಸ್ಲಾಂ ಕಮಿಟಿಯ ಚುನಾವಣಾ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಮತದಾರರ ಪಟ್ಟಿ ಪರಿಷ್ಕರಣೆಯ ಹಂತವೂ ಆರಂಭವಾಗಿತ್ತು. ಆದರೆ ಜಿಲ್ಲಾ ವಕ್ಫ್ ಅಧಿಕಾರಿಗಳ ವರ್ಗಾವಣೆಯ ಕಾರಣದಿಂದಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ತಾತ್ಕಾಲಿಕ ವಿಳಂಬ ಉಂಟಾಯಿತು. ಇದೀಗ ಶ್ರೀಮತಿ ತಬ್ಬಸ್ಸುಮ ಮುಲ್ಲಾ ಅವರು ಜಿಲ್ಲಾ ವಕ್ಫ್ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ, ಮುದ್ದೇಬಿಹಾಳ ಅಂಜುಮನ್ ಹಿತರಕ್ಷಣಾ ಸಮಿತಿಯ ನಿಯೋಗವು ಅವರನ್ನು ಭೇಟಿ ಮಾಡಿ ಚುನಾವಣಾ ಪ್ರಕ್ರಿಯೆಯ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿತು. ಈ ವೇಳೆ, ಚುನಾವಣೆಯನ್ನು ಯಾವುದೇ ಅನಗತ್ಯ ವಿಳಂಬವಿಲ್ಲದೆ ಪುನರಾರಂಭಿಸಿ, ವಕ್ಫ್ ನಿಯಮಾವಳಿಗಳ ಪ್ರಕಾರ ಪಾರದರ್ಶಕ ಹಾಗೂ ನ್ಯಾಯಸಮ್ಮತ ರೀತಿಯಲ್ಲಿ ಪೂರ್ಣಗೊಳಿಸುವಂತೆ ಸಮಿತಿಯು ಮನವಿ ಸಲ್ಲಿಸಿತು. ಅಂಜುಮನ್ ಇಸ್ಲಾಂ ಕಮಿಟಿಯ ಚುನಾವಣೆ ಸಮುದಾಯದ ಪ್ರಜಾಪ್ರಭುತ್ವ, ಪಾರದರ್ಶಕ ಆಡಳಿತ ಮತ್ತು ಸಂಸ್ಥೆಯ ಅಭಿವೃದ್ಧಿಗೆ ಅತ್ಯಂತ ಮಹತ್ವದ್ದಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಂಡು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವ ಮೂಲಕ ಸಮುದಾಯದ ನಿರೀಕ್ಷೆಯನ್ನು ಈಡೇರಿಸುವರೆಂಬ ವಿಶ್ವಾಸವನ್ನು ಹಿತರಕ್ಷಣಾ ಸಮಿತಿಯು ವ್ಯಕ್ತಪಡಿಸಿದೆ.

ಕಾಮೆಂಟ್‌ಗಳು (0)

ಕಾಮೆಂಟ್ ಮಾಡಲು ಲಾಗಿನ್ ಮಾಡಿ.

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ!